Wedding day Poem
ನಿನ್ನ ಕನಸಿನ ಮೊಳಕೆಗೆ ನಾ ಭೂಮಿಯಾಗುವೆ!
ಮೊಳಕೆಯ ಚಿಗುರೆಲೆಗೆ ನೀರುಣಿಸುವ ಬೇರಾಗುವೆ;
ಚಿಗುರೆಲೆಯ ತುದಿ ಮೊಗ್ಗಿಗೆ ರವಿಯಾಗುವೆ!
ರವಿ ಅರಳಿದ ಹೂವಿಗೆ ದುಂಬಿಯಾಗುವೆ;
ದುಂಬಿ ಕಟ್ಟುವ ಅಂದದ ಗೂಡಾಗುವೆ!
ಗೂಡು ಅಡಗಿಟ್ಟ ಸಿಹಿ ಹನಿಯಾಗುವೆ;
ಹನಿ ಹನಿ ಕೂಡಿದ ಮುತ್ತಿನ ಮಾಲೆಯಾಗುವೆ!
ಮಾಲೆಗಾಗಿ ಕೊರಳ ಹುಡುಕುವ ರಾಜನಾಗುವೆ;
ರಾಜನಾಗಿ ಮಂಡಿಊರಿ
ನಿನ್ನ ಪ್ರಸ್ತಾಪಿಸಿ,
ನನ್ನ ಲೋಕದ ರಾಣಿಯನ್ನಾಗಿಸುವೆ.
- ಪವನ್